ಚಿಗುರಿದ ಕನಸು ೨೦೦೩ರಲ್ಲಿ ತೆರೆ ಕಂಡ , ನಾಗಾಭರಣ ನಿರ್ದೇಶಿಸಿದ ಚಲನಚಿತ್ರ. ಮುಖ್ಯ ಭೂಮಿಕೆಯಲ್ಲಿ ಶಿವರಾಜ್‍ಕುಮಾರ್_(ನಟ), ರೇಖ ಉನ್ನಿ ಕೃಷ್ನನ್, ಅವಿನಾಶ್_(ನಟ) ಇದ್ದಾರೆ. ಈ ಚಲನಚಿತ್ರವು ಕನ್ನಡ ಸಾಹಿತಿ, ಜ್ನಾನಪೀಠ ಪ್ರಶಸ್ತಿ ಪುರಸ್ಕ್ರುತ ಶಿವರಾಮ ಕಾರಂತರ ಚಿಗುರಿದ ಕನಸು ಕಾದಂಬರಿ ಆಧಾರಿತ ಚಲನಚಿತ್ರ. == ನಟ ವರ್ಗ == ಶಿವರಾಜ್‍ಕುಮಾರ್_(ನಟ) ಅನಂತ್ ನಾಗ್ ವಿದ್ಯಾ ವೆಂಕಟೇಶ್ ರೇಖ ಉನ್ನಿ ಕೃಷ್ನನ್ ರಾಜು ಅನಂತಸ್ವಾಮಿ ಅವಿನಾಶ್_(ನಟ) ಪಂಕಜ್ ತ್ರಿಪಾಟಿ ಸುಂದರ್ ರಾಜ್ == ಕಥಾವಸ್ತು == ಬನಾರಸ್ ಹಿಂದು ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗನ್ನು ಓದುತ್ತಿದ್ದ ಬಿ.ಶಂಕರ್(ಶಿವರಾಜ್‍ಕುಮಾರ್ (ನಟ)) ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಮಗನನ್ನು ಅತಿಯಾಗಿ ಪ್ರೀತಿಸುವ ತಂದೆ ಬಿ.ಸುಂದರ್ ರಾವ್(ಅನಂತ್ ನಾಗ್) ಹಾಗು ಕಿರಿಕಿರಿ ಮಾಡುವ, ಬೆದರಿಸುವ ತಾಯಿ. ಶಂಕರನ ತಮ್ಮ ವಿಮಾನ ಚಾಲಕ. ಶಂಕರನದು ತೃಪ್ತ ಜೀವನವಾದರೂ, ಮನಸ್ಸಿನ ಮೂಲೆಯಲ್ಲಿ ಒಂದು ಕೊರಗಿತ್ತು. ಶಂಕರನ ಗೆಳತಿ ವರಲಕ್ಷ್ಮಿ(ವಿದ್ಯಾ ವೆಂಕಟೇಶ್) ಕನ್ನಡತಿ. ವರಲಕ್ಷ್ಮಿಯೊಂದಿಗೆ ಕನ್ನಡ ಮಾತನಾಡಲು ಶಂಕರನಿಗೆ ಅವನ ಕಾಲೆಜಿನ ಸ್ನೇಹಿತ ಸೀತಾರಾಮು(ರಾಜು ಅನಂತಸ್ವಾಮಿ) ಕಲಿಸುತ್ತಾನೆ. ಶಂಕರನು ದೆಹಲಿಗೆ ಹಿಂದುರುಗಿದಾಗ ಅವನ ಅಮ್ಮ ಮದುವೆಯ ನಿಶ್ಚಯ ಮಾಡಲು ಮುಂದಾಗುತ್ತಾರೆ ಮತ್ತು ಮನಸ್ಸಿಲ್ಲದೆ ಮಧುಮಗಳನ್ನು ಬೇಟಿಯಾಗಲು ಶಂಕರನು ಹೋಗುತ್ತಾನೆ. ಔತಣ ಕೂಟದಲ್ಲಿನ ಸಂಭಾಷಣೆಯಿಂದ ತನ್ನ ಅಡ್ಡ ಹೆಸರು ಬಂಗಾಡಿ ಎಂದು ತಿಳಿಯುತ್ತದೆ. ಬಂಗಾಡಿ ಊರೋ ಅಥವಾ ವ್ಯಕ್ತಿಯೆಂದು ತಿಳಿಯದ ಶಂಕರ ಅದರ ಮಹತ್ವ ತಿಳಿಯಲು ಕಾತುರನಾಗಿರುತ್ತಾನೆ. ತನ್ನ ತಮ್ಮನ ಜೊತೆ ಸುಮ್ಮನೆ ಫೋನ್ ನಲ್ಲಿ ಕನ್ನಡ ಮಾತನಾಡುವುದನ್ನು ಅವನ ತಂದೆ ಕೇಳಿಸಿಕೊಳ್ಳುತ್ತಾರೆ. " ಮಗನೆ ಕನ್ನಡದಲ್ಲಿ ಮಾತಾಡು, ಇದನ್ನು ಕೇಳಿ ಬಹಳಷ್ಟು ವರ್ಷಗಳಾಗಿವೆ. " ಎಂದು ಶಂಕರನ ತಂದೆ ಹೇಳುತ್ತಾರೆ. ತಾನು ಕನ್ನಡಿಗನೆಂದು ಶಂಕರನಿಗೆ ತಿಳಿಯುತ್ತದೆ ಮತ್ತು ತನ್ನ ಹುಟ್ಟುನೆಲೆ ಬಗ್ಗೆ ತಿಳಿಯಿತೆಂದು ಸಂತೋಷ ಪಡುತ್ತಾನೆ. ಶಂಕರನ ಅಜ್ಜ ತನ್ನ ಹುಟ್ಟೂರನ್ನು ಬಿಟ್ಟು ಬಂದಿದ್ದು ಮತ್ತೆ ಅಲ್ಲಿಗೆ ಹಿಂದಿರುಗಿಲ್ಲ ಎಂದು ಶಂಕರನ ತಂದೆ ಹೇಳುತ್ತಾರೆ. ಶಂಕರನು ತನ್ನ ಹುಟ್ಟುನೆಲೆಯ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು ಇಚ್ಚಿಸುತ್ತಾನೆ. == ಧ್ವನಿಮುದ್ರಿಕೆ == == ಉಲ್ಲೇಖಗಳು ==